'ಅಯೋಗ್ಯ' ಚಿತ್ರದ ವೇಳೆ ನಟ ಸತೀಶ್ ನೀನಾಸಂ ಕಾರು ಅಪಘಾತ | Filmibeat Kannada

2018-02-01 3

ನಟ ನೀನಾಸಂ ಸತೀಶ್ ಅವರ ಕಾರು ಅಪಘಾತವಾಗಿದೆ. 'ಅಯೋಗ್ಯ' ಸಿನಿಮಾದ ಶೂಟಿಂಗ್ ಮುಗಿಸಿ ಹೊರಡುತ್ತಿರುವ ವೇಳೆ ಈ ಘಟನೆ ನಡೆದಿದೆ. ಆದರೆ ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ. ಅಪಘಾತವಾದ ವಿಷಯವನ್ನು ಚಿತ್ರದ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

'ಅಯೋಗ್ಯ' ಸಿನಿಮಾದ ಚಿತ್ರೀಕರಣ ಮಂಡ್ಯದಲ್ಲಿ ನಡೆಯುತ್ತಿತ್ತು. ನಿನ್ನೆ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಸತೀಶ್ ವಾಪಸ್ ಹೋಗುವ ವೇಳೆ ಅವರ ಕಾರು ಅಪಘಾತ ಆಗಿದೆ. ಕಾರಿನಲ್ಲಿ ಸತೀಶ್ ಜೊತೆಗೆ ಇದ್ದ ಕಾರ್ ಡ್ರೈವರ್, ಮೇಕಪ್ ಮ್ಯಾನ್ ಮತ್ತು ಪರ್ಸನಲ್ ಅಸಿಸ್ಟೆಂಟ್ ಗಳಿಗೆ ಚಿಕ್ಕ ಪುಟ್ಟ ಗಾಯ ಆಗಿದೆ. ತಕ್ಷಣವೇ ಅವರಿಗೆ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.

'ಅಯೋಗ್ಯ' ಸತೀಶ್ ನೀನಾಸಂ ಅಭಿನಯದ ಹೊಸ ಸಿನಿಮಾ. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ.

'Lusia' fame actor Sathish Neenasam injured while car accident in Mandya Yesterday . All this happened during the shooting of the movie Ayogya

Videos similaires